
A J SHRUTI (Group Coordinator)
‘ಅರಿವುಬರುವವರೆಗೂಕೈಹಿಡಿದುನಡೆಸೆನ್ನನುಶ್ರೀಪ್ರಭುವೆ’
ಒಂದು ವರ್ಷದ AVSC ಪಯಣ
ಮಾಡಿದೆವು ಶ್ರವಣ, ಮನನ, ನಿಧಿದ್ಯಾಸವನ್ನ
ಗುರೂಜಿ ಯವರ ಮಾರ್ಗದರ್ಶನ
ಹಾಗು ಸತ್ಸಂಗದಿಂದ ಕಲಿತೆವು ವೇದಾಂತವನ್ನ
ಬಹಳಷ್ಟು ದೂರ ಕ್ರಮಿಸಿದೆವು ಇನ್ನೆಷ್ಟು ದೂರ ಅರಿಯೆ ಅರಿವು ಬರುವವರೆಗೂ ಕೈ ಹಿಡಿದು ನಡೆಸೆನ್ನನು ಶ್ರೀ ಪ್ರಭುವೆ
AJ MOHANALAKSHMI
ಹಿಂದಿನ ವರ್ಷ ಕೋವಿಡ್ನಿಂದ ಹೊರ ಚಟುವಟಿಕೆಗಳು ಭಂದಾಗಿ ಮನೆಯ ಅಂಗಳಕ್ಕೆ ಸೀಮಿತವಾದವು. ಹೀಗೆ ನಮ್ಮ ಆಧ್ಯಾತ್ಮಿಕ ಕ್ಲಾಸ್ ಓಫ್ಲೈನಿಂದ ಆನ್ಲೈನ್ ಆಯಿತು. ಮೊದ ಮೊದಲು ಕಷ್ಟವಾದರೂ ಇಷ್ಟಪಟ್ಟು ಕೇಳುತ್ತಿದೆ. ಗುರೂಜಿಯವರ ಸಣ್ಣ ಸರಣಿಗಳ ವಿಡಿಯೋ ಟಾಕ್ಸ್ಗಳು ನಮ್ಮ ಆಧ್ಯಾತ್ಮಿಕ ಸಂಶಯಗಳನ್ನು ನಿವಾರಿಸಿದವು ಮತ್ತು ಕ್ಲಾಸ್ಸಿನ ಚರ್ಚೆಗಳಿಂದ ವಿಷಯಗಳು ಮನದಟ್ಟಾಗುವುದು. ಗುರೂಜಿಯವರು ಕಲಿಸಿದ ಜ್ಯಾನದ ಬೆಳಕು ನಿಧಾನವಾಗಿ ನಮ್ಮ ಬದುಕಿನಲ್ಲಿ ಪ್ರಜ್ವಲಿಸುತ್ತಿದೆ.
AJ YASHMITHA (Joint Group Coordinator)
AVSC ಕ್ರಮದಿಂದ ಸ್ಥಿರವಾಗಿ ಶ್ರವಣ ಮನನ ನಿಧಿಧ್ಯಾಸದಲ್ಲಿ ತೊಡಗಲು ಸಾಧ್ಯವಾಗಿದೆ. ಕ್ಲಾಸಿನ ಚರ್ಚೆ, ವಿಚಾರದಿಂದ ಆಧ್ಯಾತ್ಮಿಕ ಸಾಧನೆಯನ್ನು ದೃಡ, ಸರಳವಾಗಿಸಿದೆ ಹಾಗೂ ನನ್ನನು ಸೂಕ್ಷ್ಮವಾಗಿ ಗಮನಿಸಲು ಪ್ರಶ್ನಿಸಲು ಸಹಾಯಕವಾಗಿದೆ. ಪ್ರತಿ ವಾರದ ಕ್ಲಾಸಿಗಾಗಿ ಉತ್ಸುಕತೆಯಿಂದ ಕಾಯುತ್ತಿರುತೆವೆ! ಗುರೂಜಿ ಹಾಗು ಅಲ್ಲಾ ಆತ್ಮಜ್ಯೋತಿಗಳಿಗೆ ಪ್ರಣಾಮಗಳು.

AJ RAJESWARI BHAT
ನಾನು ಗುರೂಜಿಯವರ ಪ್ರವಚನ ಯೂಟ್ಯೂಬ್ನಲ್ಲಿ ಕೇಳ್ತಾ ಇದ್ದೆ. ವಿವೇಕ ಚೂಡಾಮಣೀ,ಬ್ರಹ್ಮಸೂತ್ರ, ಭಗವದ್ಗೀತೆ, ಆತ್ಮಬೋದ ಕೇಳಿ ಮಹದಾನಂದವಯ್ತು. ಆದರೆ ಕೇಳಿದ್ದನ್ನು ಮನನ ಮಾಡಲು ಈ ಸತ್ಸಂಗದಿಂದ ಅನುಕೂಲವಾಗಿದೆ. ಯಾರು ಯಾರು ಹೇಗೆ ತಿಳಿದುಕೊಂಡಿದ್ದಾರೆ ಎಂದು ಅವರ ಮಾತಿನಲ್ಲಿ ವಿವರಿಸಿದ್ದನ್ನು ನಾವು ಕೇಳಬಹುದು. ರಮಣೀಯವರು ನಮಗೆ ಮಾರ್ಗದರ್ಶನ ನೀಡುವರು. ಶ್ರುತೀ, ಯಸ್ಮೀತ ಚಿಕ್ಕವರಾದರೂ ನಮ್ಮನ್ನು ಕ್ಲಾಸಿಗೆ join ಆಗಲು ಉತ್ತೇಜಿಸುವರು. ರಾಜೇಶ್ವರಿ ಶ್ಯಾಮಸುಂದರ್, ಮಂಗಳಾ, ಮೋಹನ ಲಕ್ಷ್ಮೀ, ಉಷಾ ಎಲ್ಲರೂ ಹಾಜರಾಗಿ ತಮಗೆ ತಿಳಿದಿದ್ದನ್ನು ಚೆನ್ನಾಗಿ ವಿವರಿಸುವರು. ಹೀಗೆ ನಮ್ಮ ಭಾನುವಾರದ ಸಂಜೆ 4 ರಿಂದ 6 ರ ಸಮಯವನ್ನು ಈ ವೇದಾಂತ ಗ್ರೂಪಿನಿಂದ ಸಾರ್ಥಕಪಡಿಸಿಕೊಳ್ಳುವೆನು.
AJ MANGALA
ನಮ್ಮ ಗುರುಗಳಾದ ಶ್ರೀ ಪ್ರಭುಜಿಯವರಿಗೆ ನನ್ನ ಪ್ರಾಥನೆಯನ್ನು ಸಲ್ಲಿಸುತ್ತಾ ವರ್ಷದ ಹಿಂದೆ ಶುರುವಾದ ಈ AVSC ಇಂದ ಶ್ರವಣ ಮತ್ತು ಅಧ್ಯಯನ ಮಾಡಿ ನಂತರ ಅದರ ಚಿಂತನೆಗೆ ಅವಕಾಶ ಮಾಡಿಕೊಟ್ಟ ಸದ್ಗುರುಗಳಿಗೆ ನನ್ನ ನಮನ . ಈ ಗ್ರೂಪ್ನ ಮೂಲಕ ಆಧ್ಯಾತ್ಮಿಕ ಸಾಧನೆಗೆ ಒಂದು ಶಕ್ತಿ ಕೊಡುತ್ತಿದೆ . ಇದರಿಂದ ನನ್ನ ಮನಸಿಗೆ ಪ್ರಶಾಂತತೆ ಹಾಗು ಸಂಪೂರ್ಣ ಶರಣಾಗಿ , ಜೀವನದಲ್ಲಿ ಒಂದು ರೀತಿಯ ನೆಮ್ಮದಿ ಹಾಗು ಬದುಕಿಗೆ ಉನ್ನತ ಅರ್ಥ ಕೊಟ್ಟಿದೆ . ಹೇಗೆ ಕೊಳಕಾದ ಬಟ್ಟೆಯನ್ನು ಸಾಬೂನಿನಿಂದ ಹಾಗು ನೀರಿನಿಂದ ಬಗೆ ಬಗೆಯಾದ ಉಪಕರಣಗಳಿಂದ ಸ್ವಚ್ಛವಾಗುವುದೋ , ಹಾಗೆ ಪ್ರತಿ ವಾರ ಕ್ಲಾಸ್ ನಿಂದ ನನ್ನ ಮನಸು ಶುದ್ಧ ವಾಗುತ್ತದೆ . ಇದಕ್ಕೆ ಶ್ರೀ ಪ್ರಭುಜಿವರಿಗೆ ನನ್ನ ಅನಂತ ಅನಂತ ನಮನಗಳು
AJ USHA
It is my luck that I got in touch with this AVSC. Guruji explains each and every aspect in an easy manner so that even a beginner like me can understand. We are fortunate to learn about scriptures like Gita and Vedanta teachings from Guruji. With guided meditation practices he teaches us how to meditate also. I thank Guruji and all the coordinators for their selfless service.
AJ RAMANI THYAGARAJAN
I have had exposure to talks on Vedanta for almost 36 years as part of Chinmaya Mission. However Atma Vichara struck to my mind only when I met Sri Narasimha Prabhuji in May 2018 followed by attending his many classes and they made a real mark in my psyche only when we started the AVSC as guided by Prabhuji.
Being a teacher by profession I have understood that the best of learning happens only when one starts teaching. It is precisely that which is happening to me in the AVSC wherein we have covered Tattva Bodha, Prabhuji’s talks on Self Enquiry and particularly since we started Vivekachudamani.
I spend at least 5 hours a week preparing for Sunday class. While sharing my understanding the Vedantic concepts are becoming not only clear to me, the classes are inspiring me to put the Vedantic knowledge into practice. I do not like to miss these classes as I learn a lot through discussion with other members. I really appreciate the sincerity, eagerness and thirst of my fellow members in taking an active part in the class. May Lord’s grace and Prabhuji’s blessings continue to be on us for strengthening Vedantic thoughts in us and abiding them in our life ahead through his Guided Meditation Sessions.