AJ VASUDEV (Group Coordinator)
AVSC manana sessions are thoroughly enjoyable. Listening to Prabhuji’s talks, contemplating on the pointers he gives, sharing the insights gained in the process are of immeasurable value. We have a compact team at Nisargadatta AVSC.
- Smt. Sajani Dani — A former banker and a corporate trainer, Sajani is a keen student of Vedanta. She organises Thursday Satsangs at The School of Ancient Wisdom. She is an old timer in the group, having joined in the beginning for Tatva Bodha sessions. She is very regular and thorough — listens to the talks fully and summarises all the points.
If you are feeling low, just pick up the phone and talk to Sajani. Just listening to her lively voice will imbibe liveliness in you.
- Sri Dayananda Rao Manae — A former industrialist, he is a regular face in many satsangs. He has been attending talks at Meditation & Study Circle for nearly two decades. He is able to switch at ease seamlessly between to very contrasting situations — complete engagement while working and serenity when doing nothing. In the manana group, there is not a session that he does not have a question.
If you are upset, just see his photo. His innocent smile will take you out of the nagging negativity.
- Sri BS Chandrashekar — A former bank officer, he is a familiar figure in literary circles. He is a poet and is well versed in Kannada (both old and new Kannada) and Sanksrit. He has translated many Sanskrit hymns into Kannada. He is ever helpful to anyone who approaches him. In the manana group, he contributes greatly to discussions through his array of questions.
If you would like to know about the meaning and meter of a hymn, Chandrashekar is the person to go.
- Sri BK Srinivasa Murthy — An old student of Prabhuji, Srinivasa Murthy joined us in the Self Knowledge talks. A former government officer, he is regular in attending our manana sessions. No one is a stranger to him. He has been coming to Meditation & Study Circle for more than a decade now. In the manana group, Srinivasa Murthy will usually be the first to volunteer sharing, which triggers discussions. His smile is infectious.
If you are hesitant about saying or doing something, talk to Srinivasa Murthy. His association will give you back your lost confidence.
ಜೀವಿಯು ಅಜ್ಙಾನದಿಂದ ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆಯೆಂದು ಹಾಗೂ ಇದೆಲ್ಲ ಮಾಯೆಯ ಪ್ರಭಾವ ಎಂದು ತಿಳಿಯದೆ ಇಡೀ ಜಗತ್ತು ನಿಜವೆಂದು ತಿಳಿದು ಸದಾ ಕಾಲ ಸುಖ-ದು:ಖ, ರಾಗ-ದ್ವೇಷ, ಆಸೆ-ನಿರಾಸೆ, ಅಹಂಕಾರ-ಮಮಕಾರಗಳಿಂದ ಪ್ರಭಾವಿತವಾಗಿ ಪುನ: ಪುನ: ಹುಟ್ಟು ಸಾವಿನಿಂದ ಹೊರಗೆ ಬರುವ ಮಾರ್ಗ ಅರಿಯದೆ ಹೊರಗಿನ ಪ್ರಪಂಚದಿಂದ ಸುಖ ದೊರೆಯುವುದೆಂದು ಭಾವಿಸುತ್ತಾನೆ. ಅದರಂತೆ ತಾನು ಅಲ್ಪಜ್ಞ, ಅಲ್ಪವ್ಯಾಪಕ, ಕಾಲಾಧೀಶ, ಗುಣಾಧೀಶ, ಹಾಗೂ ಪರಮಾತ್ಮ ಆನಾದಿ, ಅನಂತ, ಕಾಲಾತೀತ, ಗುಣಾತೀತ, ಸರ್ವಜ್ಞ, ಸರ್ವವ್ಯಾಪಕ ಮತ್ತು ಆನಂದಮಯಿ ಎಂದು ತಿಳಿದಿರುತ್ತಾನೆ.
ಜೀವಿಯು ಪರಮಾತ್ಮ ಸರ್ವವ್ಯಾಪಕ ಎಂದು ತಿಳಿದಿದ್ದರೂ ಸಹ, ತನ್ನ ಸೀಮಿತ ದೇಹ ಮನಸ್ಸು ಬುಧ್ದಿ, ಅಹಂಕಾರ ಮತ್ತು ಮಾಯೆಯ ಕಾರಣದಿಂದ ಭಗವಂತನು ಸೂಕ್ಷ್ಮರೂಪವಾಗಿ ತನ್ನೊಳಗೆ ಗೌಪ್ಯವಾಗಿ ಅಡಗಿದ್ದಾನೆ ಎಂದು ಅರಿಯದೆ ಹಾಗೂ ಪರಮಸುಖ (ಆನಂದ) ಇದೆಯೆಂದು ತಿಳಿಯದೆ ಹೊರಗಿನ ಪ್ರಪಂಚದ ವಸ್ತುಗಳ ಬಗ್ಗೆ ಪ್ರೇರಿತನಾಗಿ ಅದರಿಂದ ಸುಖ ದೊರೆಯುವುದೆಂದು ಭಾವಿಸಿ ದು:ಖದಲ್ಲಿರುತ್ತಾನೆ.
ಇದರಿಂದ ಹೊರಬರಲು ಜೀವಿಯು ವಿವೇಕದಿಂದ ವಿಚಾರ ಮಾಡಿ, ವಿವಿಧ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿ, ಸತ್ಸಂಗದಲ್ಲಿ ಭಾಗವಹಿಸಿ ಹಾಗೂ ಭಗವಂತನ ಕೃಪೆಯಿಂದ ಸದ್ಗುರುಗಳ ಪರಿಚಯವಾಗಿ, ಅವರ ಸಾಮೀಪ್ಯದಲ್ಲಿ ತನ್ನಲ್ಲಿ ಉದ್ಭವಿಸಿದ ಎಲ್ಲಾ ಅನುಮಾನ ಹಾಗೂ ಸಂಶಯಗಳಿಗೆ ಮಾರ್ಗದರ್ಶನ ಪಡೆದ ನಂತರ ಶ್ರವಣ, ಮನನ, ನಿಧಿಧ್ಯಾಸ ಹಾಗೂ ಧ್ಯಾನದಿಂದ ಅಂತರಂಗವನ್ನು ಶುಧ್ಧೀಕರಿಸಿಕೊಂಡು, ಸದಾಕಾಲ ಸಾಕ್ಷಿರೂಪದಲ್ಲಿದ್ದು ಕ್ರಮೇಣ ಅತ್ಮಸಾಕ್ಷಾತ್ಖಾರ ಪಡೆದು ಅಂತಿಮವಾಗಿ ಸರ್ವಂ ಖಲ್ಪಿದಂ ಬ್ರಹ್ಮ ಎಂಬ ಅರಿವಿನಿಂದ ಇನ್ನುಳಿದ ಜೀವನವನ್ನು ಸೇವಾಭಾವದಿಂದ ಸೇವೆ ಮಾಡುತ್ತಾ ಅಂತಿಮದಲ್ಲಿ ಸದೇಹ ಮುಕ್ತ/ ಜೀವನ್ಮುಕ್ತನಾಗಿ ಬ್ರಹ್ಮಾಂಡದಲ್ಲಿ ಐಕ್ಯನಾಗಿ ಹುಟ್ಟು ಸಾವಿನಿಂದ ವಿಮುಕ್ತಿ ಪಡೆಯುತ್ತಾನೆ.
’ಮನನ’ ಮೂಡಿಸಿದ ಚಿಂತನೆಯ ಸೆಳಕುಗಳು
ಒಬ್ಬ ವ್ಯಕ್ತಿಯನ್ನು ಜ್ಞಾನಿ ಎಂದು ಹಲವರು ಭಾವಿಸುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತೇವೆ. ಆತ್ಮಜ್ಞಾನಿ ಯಾರೆಂದು ಕಂಡುಕೊಳ್ಳುವ ಬಗೆ ಹೇಗೆ? ಜ್ಞಾನಿಯಾದವನು ತಾನು ಜ್ಞಾನಿ ಎಂದು ಹೇಳಲಾರ. ಇತರರ ಸಂಗತಿ ಹೇಗಾದರೂ ಇರಲಿ, ತಾನು ಜ್ಞಾನಿಯೇ ಅಥವಾ ಅಲ್ಲವೇ ಎಂದು ತಿಳಿಯುವುದಾದರೂ ಹೇಗೆ? ಸಾಧಕರೊಬ್ಬನಿಗೆ ಧ್ಯಾನದ ಸ್ಥಿತಿಯಲ್ಲಿ, ಭಾವಸಮಾಧಿಯಲ್ಲಿ ಆಗುವ ಯಾವುದೋ ವಿಶಿಷ್ಟ ಅನುಭವದಿಂದ ಅವರು ತಾನು ಜ್ಞಾನಿ ಎಂದು ಭಾವಿಸಲು ಸಾಧ್ಯವೇ? ಆತ್ಮಜ್ಞಾನವು ಒಂದು ತಾತ್ಕಾಲಿಕ ಮನಸ್ಥಿತಿಯಾಗಿರಲಾರದು. ಆತ್ಮನು ನಿರಾಕಾರ, ನಿರ್ಗುಣ ಎಂದೆಲ್ಲ ಕೇಳಿ ಅದನ್ನು ಒಪ್ಪುತ್ತೇವೆ. ಎಲ್ಲರೂ ಅತ್ಮ ಎಂದೂ ಕೆಲವು ಜ್ಞಾನಿಗಳು ಹೇಳುವುದಿದೆ.
ನಾವು ಅನೇಕ ವಿಷಯಗಳನ್ನು ಅರಿಯಬಯಸುತ್ತೇವೆ, ಸರಿ. ಆದರೆ ಹೀಗೆ ಎಲ್ಲವನ್ನೂ ಅರಿಯಬಯಸುತ್ತಿರುವ ನಮ್ಮೊಳಗಿನ ‘ನಾನು’ ನಿಜವಾಗಿ ಯಾರು ಎಂದು ತಿಳಿಯದಿದ್ದರೆ ನಮ್ಮ ಅಸ್ತಿತ್ವ ಪೂರ್ಣವೆಂದು ಭಾವಿಸಬಹುದೇ? ಬದುಕಿನಲ್ಲಿ ತನ್ನನ್ನು ತಾನು ಅರಿತುಕೊಳ್ಳುವುದು ಅತ್ಯಂತ ಮುಖ್ಯ. ಆತ್ಮನು ಅವಿನಾಶಿ, ಅನಂತ. ಅವನ ಶಕ್ತಿಯಿಂದಲೇ ದೇಹದ ಕರಣಗಳು ಅದರದರ ಕೆಲಸಗಳನ್ನು ಮಾಡುತ್ತವೆ. ಜೀವಗಳು ಬೇರೆಬೇರೆಯೆಂಬುದು ತೋರಿಕೆ. ಒಂದು ವಿದ್ಯುದ್ದೀಪ ಅಥವಾ ಒಲೆ, ಶೀತಕ ಯಂತ್ರ, ವಿದ್ಯುತ್ತಿನಿಂದ ಚಲಿಸುವ ವಾಹನ ಅಥವಾ ವಿವಿಧ ಕಾರ್ಯಗಳನ್ನು ಮಾಡುವ ಯಂತ್ರ … ಇವೆಲ್ಲವುಗಳ ಅಂತರ್ಯಾಮಿಯಾಗಿ ಕೆಲಸ ಮಾಡುವುದು ನಿರಾಕಾರವಾದ, ಅಗ್ರಾಹ್ಯವಾದ, ಅಭೌತಿಕವೆನಿಸಬಹುದಾದ, ವರ್ಣಿಸಲು ಸುಲಭಸಾಧ್ಯವಲ್ಲದ ವಿದ್ಯುತ್ ಶಕ್ತಿ. ಈ ವಸ್ತುಗಳಿಗೆ ಮನಸ್ಸುಗಳಿದ್ದಿದ್ದರೆ ತಾವೇ ಈ ಕಾರ್ಯಗಳನ್ನು ಮಾಡುತ್ತಿದ್ದೇವೆಂದು ಭಾವಿಸುತ್ತಿದ್ದವೇನೋ …. ನಾವು ಭಾವಿಸುವಂತೆಯೇ ! ನನ್ನ ಉಸಿರಾಟ ತಂತಾನೇ ಆಗುತ್ತದೆ, ನನ್ನ ಹೃದಯದ ಬಡಿತ ತನ್ನಷ್ಟಕ್ಕೆ ತಾನೇ, ಹಾಗೇ ದೇಹದಲ್ಲಿನ ರಕ್ತಸಂಚಾರ, ಜೀರ್ಣಕ್ರಿಯೆ ಮೊದಲಾದ ಅತಿ ಸಂಕೀರ್ಣ ಕ್ರಿಯೆಗಳೂ ‘ನನ್ನ’ ಮಧ್ಯಪ್ರವೇಶವಿಲ್ಲದೆ ಸ್ವಾಭಾವಿಕವಾಗಿ ನಡೆಯುತ್ತಿರುತ್ತವೆ. ಹೀಗಿರುವಾಗ ಈ ನಾನು ಎಂದುಕೊಳ್ಳುವುದು ಚಿಂತನೆಯ ಒಂದು ಕ್ರಮವಷ್ಟೆ ಎನಿಸುತ್ತದೆ. ನಾನು ಯಾರೆಂದು ಸರಿಯಾಗಿ ತಿಳಿಯುವುದಕ್ಕೆ ಮುಂಚೆ ಈ ದೇಹ ನಾನು, ಈ ಉಸಿರು ನಾನು, ಈ ಮನಸ್ಸು ನಾನು ಎಂದು ಹೀಗೆಲ್ಲ ಅಂದುಕೊಳ್ಳಬಹುದು. ಆದರೆ ನನ್ನ ನಿಜವಾದ ಸ್ವರೂಪದ ಸ್ಪಷ್ಟ ಅರಿವಾದಾಗ ಮೊದಲಿನ ತಿಳಿವಳಿಕೆ ಯಥಾರ್ಥವಲ್ಲ ಎಂದು ತಿಳಿಯುತ್ತದೆ. ನಾನು ಎಂಬುದೇ ಇಲ್ಲವಾಗಿರುವಾಗ ಅಥವಾ ಮಿಥ್ಯೆಯಾಗಿರುವಾಗ ‘ನಾನು ಜ್ಞಾನಿ’ ಎಂದುಕೊಳ್ಳುವುದು ಅಜ್ಞಾನವಲ್ಲದೆ ಮತ್ತೇನಾದೀತು? ಹಾಗೆಯೇ ನಾನು ಅಜ್ಞಾನಿ ಎಂದುಕೊಳ್ಳುವುದೂ ಸರಿಯಾದ ಜ್ಞಾನವಾಗಿರಲಾರದು. ಎಲ್ಲ ಜೀವಿಗಳಿಂದಲೂ ಅವರವರ ಕಾರ್ಯಗಳನ್ನು ಆಗಮಾಡಿಸುವ ಚೈತನ್ಯ ಶಕ್ತಿಯೊಂದಿದೆ ಎಂಬ ನಿಚ್ಚಳ ಅರಿವು ಆತ್ಮಜ್ಞಾನದ ಹಾದಿಯಲ್ಲಿ ಒಂದು ಮಹತ್ವದ ಮೈಲುಗಲ್ಲು. ಆ ಶಕ್ತಿ ನಮ್ಮ ಹೊರಗೆ ಇಲ್ಲ, ಒಳಗೇ ಇದೆ. ವಾಸ್ತವವಾಗಿ ಅದಕ್ಕೆ ಒಳಗು-ಹೊರಗು ಎಂಬುದೇ ಇಲ್ಲ!
ಆತ್ಮಜ್ಞಾನವುಂಟಾದವನಿಗೆ ‘ನಾನು’ ಎಂಬ ಭಾವ ಕಳೆದು ಹೋಗಿರುತ್ತದೆ ಎಂದು ಕೇಳಿದ್ದೇವೆ. ನನ್ನನ್ನು ಅರಿತುಕೊಳ್ಳಲು ಎಷ್ಟೋ ಸಾಧನೆ ಮಾಡಿ ಕೊನೆಗೆ ನಾನೆಂಬುದು ಇಲ್ಲವೆಂದು ಅರಿಯುವುದೇ ಆತ್ಮಜ್ಞಾನವೆನಿಸುವುದು ಅತ್ಯಂತ ಸೋಜಿಗದ ಸಂಗತಿಯೇ ಆದರೂ ಬಹುಶಃ ಅದೇ ಸತ್ಯವಿದ್ದೀತು. ಸಮುದ್ರದ ಆಳವನ್ನು ಅಳೆಯಹೊರಟ ಉಪ್ಪಿನ ಗೊಂಬೆ ಅದರ ಆಳದಲ್ಲಿ ಮುಳುಗುತ್ತಾ ಮುಳುಗುತ್ತಾ ಇಲ್ಲವಾಗುತ್ತದೆ. ಅಹಂಕಾರವು ತಗ್ಗಿದಷ್ಟೂ ನಾನು ಎಂಬ ಭಾವ ಸಂಕುಚಿತತೆಯಿಂದ ಬಿಡುಗಡೆಗೊಂಡು ವಿಸ್ತಾರವಾದಷ್ಟೂ ನಾವು ಜ್ಞಾನಕ್ಕೆ ಹತ್ತಿರ. ಆದ್ದರಿಂದ ಆತ್ಮಸಾಕ್ಷಾತ್ಕಾರವನ್ನು ಅನುಭವವೆನ್ನದೆ ‘ನಾನು’ ಎಂಬ ಭಾವವಿಲ್ಲದಿರುವಂಥ ಸ್ಥಿತಿ ಎನ್ನಲಾಗಿದೆ.
ಬಾವಿಯ ಕಪ್ಪೆಯೊಂದು ಬಾವಿಯನ್ನೇ ಪ್ರಪಂಚವೆಂದುಕೊಂಡಿದ್ದು ನಿಜವಾದ ಬೃಹತ್ ಪ್ರಪಂಚವನ್ನು ನೋಡಿದಾಗ ಅದಕ್ಕೆ ಮತ್ತೆ ‘ಬಾವಿಯೇ ಪ್ರಪಂಚ’ ಎನ್ನಿಸುವ ಸಾಧ್ಯತೆಯಿಲ್ಲ, ಅಲ್ಲವೇ? ಆ ಕಪ್ಪೆಗೆ ತಾನು ಮೊದಲು ತಿಳಿದದ್ದು ವಾಸ್ತವವಲ್ಲ, ಕೇವಲ ಕಲ್ಪನೆ ಅಥವಾ ಭ್ರಮೆ ಎನ್ನಿಸುತ್ತದೆ. ಹಾಗೆಂದು ಬಾವಿಯೇ ಇರಲಿಲ್ಲವೆಂದಲ್ಲ, ಅದೂ ಇತ್ತು; ಆದರೆ ಅದನ್ನು ಮೀರಿದ ಬಹುದೊಡ್ಡದಾದ ಒಂದು ಸಂಗತಿ ಈಗ ಕಪ್ಪೆಯ ಅರಿವಿಗೆ ಬಂತು. ಹಾಗೆಯೇ ಆತ್ಮದ ಅರಿವಾದಾಗ ದೇಹ, ಮನಸ್ಸು, ಪ್ರಾಣ, ಉಸಿರು, ಬುದ್ಧಿ ಎಲ್ಲವೂ ಇದ್ದರೂ, ಅವು ಇದೆಯೆಂದು ನಮ್ಮೆಲ್ಲರಿಗೂ ಅನಿಸುವಂತೆಯೇ ಜ್ಞಾನಿಗೂ ಅನ್ನಿಸಿದರೂ, ಅದಕ್ಕಿಂದ ಬಹು ದೊಡ್ಡದಾದ, ಬಹಳ ವಾಸ್ತವವಾದ, ಪರಮಸತ್ಯದ ಅರಿವು ಇರುವುದರಿಂದ ಇವೆಲ್ಲವೂ ಗೌಣ -ಗಣನೆಗೆ ಬಾರದ್ದು ಎನಿಸುತ್ತದೆ.
ಈ ಮೇಲಿನವು ‘ಮನನ’ದ ಪರಿಣಾಮವಾದ ಚಿಂತನೆಗಳ ಕೆಲವು ಸೆಳಕುಗಳು. ಎರಡು ತಿಂಗಳುಗಳಿಂದ ‘ಮನನ’ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಅರಿವು ವಿಸ್ತಾರಗೊಳ್ಳುವುದು ಅನುಭವಕ್ಕೆ ಬರುತ್ತಿದೆ. ಸರಿಯಾಗಿ ತಿಳಿದ ಸಂಗತಿಗಳು ಮತ್ತಷ್ಟು ಭದ್ರಗೊಳ್ಳುತ್ತಿವೆ. ಈ ಮೊದಲು ಅರಿವಿಗೇ ಬಾರದಿದ್ದ ಸಂಗತಿಗಳು ಅಸ್ಪಷ್ಟವಾಗಿಯಾದರೂ ತೋರತೊಡಗುತ್ತಿವೆ. ಸತ್ಯದೆಡೆಗೆ ನಮ್ಮ ಪಯಣಕ್ಕೆ ‘ಮನನ’ ಒಂದು ಉಪಯುಕ್ತ ಸಾಧನ. ‘ಮನನ’ ಕಾರ್ಯಕ್ರಮವನ್ನು ದರ್ಶಿಸಿ ರೂಪಿಸಿದ ಗುರುವರ್ಯರಿಗೆ ಹಾಗೂ ಕಾರ್ಯಕ್ರಮಕ್ಕೆ ಚಾಲನೆಯಿತ್ತು ಮನನದಲ್ಲಿ ಎಲ್ಲರೂ ಪೂರ್ಣವಾಗಿ ಪಾಲ್ಗೊಳ್ಳುವಂತೆ ವಿಚಾರಮಂಥನ ನಡೆಸುತ್ತಿರುವ ಆತ್ಮೀಯ ವಾಸುದೇವ್ ಅವರಿಗೆ ಮತ್ತು ಸಹ ಚಿಂತಕರಿಗೆ ಕೃತಜ್ಞತಾಪೂರ್ವಕ ವಂದನೆಗಳು.🌷👏
ಬಿ.ಎಸ್. ಚಂದ್ರಶೇಖರ್
3.2.2022, ಗುರುವಾರ.
ಕವನ
ಅದೆ ಇದೆ
ಓಮೆಂಬುದು ಅದೆ ತತ್ತೆಂಬುದು ಅದೆ
ಚಿತ್ತೆಂಬುದು ಅದೆ ಸತ್ತೆಂಬುದು ಅದೆ
ತಾನೆಂಬುದು ಅದೆ ಆನಂದ
ಇದಲ್ಲವಿದಲ್ಲವೆನ್ನುತ ಓಡಿದೆ
ಇದೆ ಇದೆ ಇದೆ ನೋಡೆನ್ನುತ್ತಿದೆ
ಇಲ್ಲೆಯ ತಾನಿದೆ ಸ್ವಸ್ಥವಿದೆ
ಸತಿಪತಿ ಸುತ ಮನೆ ವಾಹನ
ವಿತ್ತದಿ ರಮಿಸಿಹ ಚಿತ್ರವದೇ
ವ್ರತ ದರ್ಶನ ಪೂಜೆಯದೇ
ಸಾಧನೆ ಜಪ ಉಪವಾಸವದೇ
ಹಿಂದಿದ್ದುದು ಇದೆ ಮುಂದಿಹುದೂ ಅದೆ
ಇಂದಿಲ್ಲಿಹುದಿಹುದೆಂಬುದಿದೆ
ಗುಹೆಯೊಳಗಿಹುದದೆ ಗಗನದೊಳಗು ಅದೆ
ಶಂಕರನೊಳಗದು ಮಧ್ವಸುಧೆ
ಮೂಲದಿ ಸ್ವಾದಿಷ್ಠಾನದಿ
ಮಣಿಪೂರ ಅನಾಹತದೊಳಗು ಅದೆ
ಆಜ್ಞೆಯ ಚಕ್ರವದೇ
ಸಾವಿರದಳ ಪದ್ಮವು ಅದರಿಂದಾಚೆಗದೇ
ಅದೆ ಎನ್ನೆದೆಯೊಳಗಹಮಹಮೆನುತಿದೆ
ನಿನ್ನೊಳು ಅವಳವನದರೊಳು ಮಿಡಿದಿದೆ
ಜೀವದಿ ಜಡದಿ ವಿಜೃಂಭಿಸಿದೆ
ಮೂಲವದೇ ಮಧ್ಯವದೇ
ಅಂತ್ಯವದೇ ಅನಂತವದೇ
ಹುಟ್ಟದೆ ಮೆಟ್ಟಿದೆ ಸಾವಿನೆದೆ.
ಧೂಳದೆ ನೀರದೆ ಬೆಂಕಿಯದೇ
ಗಾಳಿಯು ಗಗನವದೇ
ಮನವದೆ ಬುದ್ಧಿಯು ಜೀವವದೇ
ಅದಲ್ಲದುದಾವುದಿದೆ?
ದದದದವೆನ್ನುತ ಮೇಘದಲಿ
ಗಂಧವ ಪಸರಿಸಿ ಪೃಥ್ವಿಯಲಿ
ಸುಯ್ಯೆನ್ನುವುದದೆ ಗಾಳಿಯಲಿ
ಜುಳುಜುಳುವೆನುವುದು ಜಲದಲಿ
ಧಗಧಗವೆಂದಿದೆ ಬೆಂಕಿಯಲಿ
ಬಗೆ ತೆರೆದಿಹುದದು ಗಗನದಲೂ
ಮಿಗೆ ನಿದ್ರಿಸಿದೆಯದರಾಚೆಯಲೂ
ನರಮಂಡಲ ರುಧಿರ ಅಸ್ಥಿಯ ಹಂದರ
ಪರಿಪರಿಯಂತಃಕರಣವದೇ
ಬೇರದೆ ಎಲೆಯದೆ ಹೀಚದೆ ಹಣ್ಣದೆ
ತೋರದ ಬೇರಿನ ಮಣ್ಣಿನ ಕಣ್ಣದೆ
ಜನನವೆಂಬುದದೆ ಮರಣವು ತಾನದೆ
ಜರೆಯೆಂಬುದದು ರೋಗವದೇ
ಬೀಜವದೇ ವೃಕ್ಷವದೇ ಹೂವದು ಹಣ್ಣು ಅದೇ
ಕಾರ್ಯವು ಕಾರಣ ಎಲ್ಲವದೇ
ಚರ್ಮವದೇ ಚಕ್ಷುವದೇ
ಕರ್ಮದ ಮರ್ಮವದೇ
ಎಚ್ಚರ ಕನಸು ಸುಷುಪ್ತಿಯದೇ
ಯಮ ನಿಯಮಾಸನ ಎಲ್ಲವದೇ
ಜಡತೆಯ ಭ್ರಾಂತಿಯದೇ
ಯೋಗ ಸಮಾಧಿಯದೇ
ಬುದ್ಧಿಯದೇ ಮನವು ಅದೇ
ಬಂಧನವೆನುತಿಹ ಕಾಯವದೇ
ಅರಿವಿರದೆನಗೆನುತಿಹ ಜ್ಯೋತಿಯದೇ
ಬಂಧವ ಬಯಸಿಹ ಮುಕ್ತವದೇ
ಓಮೆಂಬುದು ಅದೆ ತತ್ತೆಂಬುದು ಅದೆ
ತಾನೆಂಬುದು ಅದೆ ಆನಂದ
ಕವನ ರಚನೆ:
ಬಿ.ಎಸ್. ಚಂದ್ರಶೇಖರ್
[8.2.18, ದಿ ಸ್ಕೂಲ್ ಆಫ್ ಏನ್ಷಿಯೆಂಟ್ ವಿಸ್ಡಂ, ಬೆಂಗಳೂರು]
The power of two hands — Bhakti
Silence is not created but sound is created. Silence is always present. We cannot clap with one hand (Advaita) — it is silence. It requires two hands to clap and produce sound (Dvaita).
When we get two palms together in prayer (pranam), it is called Bhakti. Real bhakti is surrender and is egoless. After transcending B.M.I, jiva merges with Atman. The art of knowing this is the goal of life. The Sadhguru’s guidance and blessings can take our sadhana towards our goal.
I offer this to my Sadhguru Sri Narashimha Prabhuji, who has been nurturing, guiding, training and blessing me in my sadhana.
Your Disciple.
N.Dayananda Rao Manae