AVSC RAMANA-1 GROUP

This image has an empty alt attribute; its file name is image-8.png

AJ SATYAVATHI (Group Coordinator)

Hari Om Guruji and Pranams to all Atmajyotis. My journey with Guruji began in March 2016. Words fall short to express my Gratitude to the Divine Sadguru for showering his immense Grace upon me and all of us. It is a beautiful journey. 

AVSC is the vision of Prabhuji. When my name came up for coordinator’s role, initially I was hesitant. After 3 months again my name was suggested. Then I realized that it was the ‘personal me’ who is resisting. I took up the role and found immense changes in me (the personal me). Thanks to all the Ramana 1 team members for connecting through AVSC. Of Course it is nothing but Guruji’s Grace only. 

Our AVSC sessions are going well. All the Atmajyotis are very much committed to learning and unlearning. There is a vibrant energy of  Sadguru in all our sessions. We have covered Tattvabodha, Self Knowledge talks and now doing Aparokshanubhuti. 

One thing I would like to say is …just surrender to the Sadguru…things go on happening beautifully. It is the will of God only. Sadguru knows the requirements of each and every one under his shadow. 

Blessed are we all to be connected in the path of Atma Jnana. 

Atmajyoti Sathyavathi

Ramana 1 (Kannada)

This image has an empty alt attribute; its file name is image-9.png

AJ MALA SURESH

ನನ್ನನ್ನು ನನಗೆ ಪರಿಚಯಿಸಿದ ಪರಮತತ್ತ್ವ, ಪರಮ ಗುರುಗಳಿಗೆ “ನಾನು” ಎಂಬ ಸಂಬೋಧನೆ ಮಾಡಲು ಹುರುಪು, ಹುಮ್ಮಸ್ಸನ್ನು ತುಂಬುತ್ತಿರುವ… ಈ ಜನ್ಮ ಸಾರ್ಥಕ – ಕಂಡೆ ನಾನು ಹರಿಯ ಜಗದ ಒಡೆಯನ ಜಗದೋದ್ಧಾರನ, ಸರ್ವರನ್ನು ಸಲಹುವ ಗುರು ಮಹಿಮನೆ, ಗುರುವೇ ನಿನ್ನ ಪಾದಕ್ಕೆ ಕೋಟಿ ಕೋಟಿ ನಮನ.

 ಸದ್ಗುರು ಪ್ರಭುಜಿಯವರಿಗೆ ಅಂಕಿತ! 

ಸಂಘರ್ಷಗಳು ಬಂದದ್ದೆಲ್ಲಾ ನಾನು ರಾಜಮಾರ್ಗಕ್ಕೆ ಬರಲು. ಈ ಜಗದಲ್ಲಿ  ಹುಟ್ಟಿದ ಅನೇಕ ದಾಸರೂ, ಇತಿಹಾಸಕಾರರೂ, ಜ್ಞಾನಿಗಳೂ, ಬಿಟ್ಟು ಹೋದ ಹೆಜ್ಜೆ ಗುರುತನ್ನು ಗುರುತಿಸಿ ಅನಂತತೆಯಲ್ಲಿ ನಿಲ್ಲಲು. ನಾನು ಕೈ ಹಿಡಿದರೆ ಯಾವಾಗಲಾದರೂ ಕೈ ಬಿಡಬಹುದು. ಆದರೆ ನನ್ನ ಗುರುವಿನ ಪ್ರತಿ ಪದವೂ ಶ್ರವಣ, ಮನನ, ನಿಧಿಧ್ಯಾಸದ ಮೂಲಕ, ನನ್ನ ದೇಹದ ಕಣ ಕಣದಲ್ಲಿ ತುಂಬುತ್ತಾ, ತುಂಬುತ್ತಾ, ನನ್ನ ಗುರುವಿನ ಆಲೋಚನೆ, ವಿಚಾರಧಾರೆ ರಕ್ತದಲ್ಲಿ ರಕ್ತವಾಗಿ, ನನ್ನ ಹೃದಯ ಮಿಡಿತವಾಗಿ, ನನ್ನ ಹೃದಯ ಸಿಂಹಾಸನದಲ್ಲಿ ರಾರಾಜಿಸುತ್ತಾ ಕುಳಿತಿರುವ ಗುರುಗಳು. 

ಅವರ ಒಂದೊಂದು ಯೋಚನೆಯನ್ನು ಈ ದೇಹ, ಮನಸ್ಸು, ಬುದ್ಧಿಯಿಂದ ಬದಲಿಸುತ್ತಿರುವ ಈ ಜೀವ, ಮಾಂಸ ಮುದ್ದೆಯನ್ನು ಬ್ರಹ್ಮ ತಗುಲಿದ ಬ್ರಹ್ಮನಾಗಿಸುತ್ತಿರುವ ಗುರು ಇವರು.  “ಘರ್ ಘರ್ ಗುರುಕುಲ” ಅವರ ಕನಸು. ಆ ಕನಸು ಸಾಕಾರ ಕಂಡಿದ್ದು ನಮ್ಮ AVSC ತರಗತಿಗಳಿಂದ. ನಮಗೆ ಇದು ಒಂದು ಕುಟುಂಬವಾಗಿದೆ. ಇಲ್ಲಿರುವ ಒಬ್ಬೊಬ್ಬ ಸಂಯೋಜಕರೂ… ಗಾಯತ್ರಿ,ಕಾತ್ಯಾಯಿನಿ, ಪೂರ್ಣಿಮಾ, ಸತ್ಯ… ನನ್ನ ಒಳಗಿನ ಸಾಕಾರ ರೂಪಕ್ಕೆ ಮತ್ತಷ್ಟು ಒತ್ತನ್ನು  ಕೊಟ್ಟಂತ ಆತ್ಮ ಜ್ಯೋತಿಗಳು.  

ಗುರುಮಾ!! ಇವರೆಲ್ಲರಿಗಿಂತ ಒಂದು ಕೈ ಹೆಚ್ಚು. ಅವರ ಒಂದು ಮಾತು ನಮ್ಮ AVSC ತರಗತಿಯ ಒಂದು ಮಂತ್ರವಾಗಿದೆ. “ನಾಳೆಯನ್ನು ನಾಳೆ ನೋಡೋಣ”. ಒಟ್ಟಾರೆ ಈ ಬೆತ್ತವನ್ನು ಕೊಳಲಾಗಿಸಿದ ವೈಣಿಕ ನನ್ನ ಗುರು. ಈ ಕೊಳಲಲ್ಲಿ ಯಾವ ಸಂದರ್ಭಕ್ಕೆ ಏನು ಪದ ಬರಬೇಕು, ನುಡಿಯಬೇಕು, ಸ್ವರ ಹೊಮ್ಮಬೇಕು – ಎಲ್ಲಾ ನಮ್ಮ “ಬ್ರಹ್ಮ” ರಿಗೆ ಮೀಸಲು. ಅಂತೂ ಎಲ್ಲರೊಳಗೆ ಒಂದಾದ ಈ ಜೀವನ ತುಂಬಾ ಸ್ವಾರಸ್ಯವಾಗಿದೆ…. ಚಿರಋಣಿ ….

ಶರಣು…ಶರಣು….ಶರಣು… ಬ್ರಹ್ಮಯ್ಯ (ಬೊಮ್ಮಣ್ಣ)

AJ Mala

This image has an empty alt attribute; its file name is vasudha-new-300x225.jpeg

ಆತ್ಮಜ್ಯೋತಿ ವಸುಧಾ 

ಪ್ರೀತಿ, ಮಮತೆಯ ಸಾಕಾರ ಮೂರ್ತಿ, ದಶ ದಿಕ್ಕುಗಳಲ್ಲಿ ಹರಡಿದೆ ಜ್ಞಾನದ ಕೀರ್ತಿ 

ನೀವಾಗಿರುವಿರಿ ನಮ್ಮೆಲ್ಲರ ಗುರು ಮೂರ್ತಿ , ನಮ್ಮೆಲ್ಲರ ಆತ್ಮಜ್ಞಾನದ ದಾಹ ತಣಿಸುವ ಸ್ಪೂರ್ತಿ

ಮನ ಮನದಲ್ಲೂ ಅರಳುತಿದೆ ಆತ್ಮ ಜಾಗೃತಿ… ಪ್ರೀತಿಯ ಗುರೂಜಿಯವರ ಪಾದ ಕಮಲಗಳಿಗೆ ಶಿರ ಸಾಷ್ಟಾಂಗ ನಮನಗಳು. 

ಗುರೂಜಿ Light  of the Self ಮೂಲಕ ಮಾಡುತ್ತಿರುವ ಆತ್ಮಜ್ಞಾನದ ಬಗೆಗಿನ ಉಪನ್ಯಾಸ, ತರಗತಿಗಳು ಶಬ್ದಗಳಲ್ಲಿ ವರ್ಣಿಸಲಾಗದ ಶ್ರೇಷ್ಠ ಕಾಯಕವಾಗಿದೆ.  ಪಾಮರರಿಗೂ ಸುಲಭದಲ್ಲಿ ಅರ್ಥವಾಗುವ ರೀತಿಯಲ್ಲಿ ನೀವು ವೇದದ ಸಾರವನ್ನು, ಭಗವದ್ಗೀತೆ, ಪುರಾಣಗಳನ್ನು ವರ್ಣಿಸುವ ರೀತಿ, ನಮ್ಮ ದಿನನಿತ್ಯದ ಬದುಕಿನ 

ಉದಾಹರಣೆಯನ್ನು, ನೀವು ಹೇಳುವ ರೀತಿ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ. ಜೀವ- ಜೀವನದ ಉದ್ದೇಶವನ್ನು ಅತ್ಯಂತ ಸರಳವಾಗಿ ವಿವರಿಸಿ ನಮ್ಮನ್ನು ಆ ನೆಲೆಯಲ್ಲಿ ನಿಂತುಕೊಳ್ಳಲು ಪೂರ್ಣ ಯೋಗದ ತರಗತಿಗಳು ತುಂಬಾ ಸಹಾಯಕವಾಗಿದೆ. 

AVSC ಮೂಲಕ ಜ್ಞಾನದ ಬುನಾದಿ ಹಾಕುತ್ತಿರುವ ಗುರೂಜಿಯವರಿಗೆ ಎಲ್ಲಾ ಆತ್ಮಜ್ಯೋತಿಯರಿಂದ ಕೋಟಿ ಕೋಟಿ ನಮನಗಳು. 

This image has an empty alt attribute; its file name is image-10.png

AJ GURU ANAND

ಸದ್ಗುರು ದೇವ

ಸದ್ಗುರು ದೇವ ಸದ್ಗುರು ದೇವ – ಶ್ರೀ ಪ್ರಭುಜಿ ನಮೋ ನಮೋ |

ನಿನ್ನಯ ಕೃಪೆಯು ರಕ್ಷಾ ಕವಚವು – ನಿನ್ನಯ ನುಡಿಯು ಸತ್ಯ ವಚನವು ||

ಜಗದ ಜನರಿಗೆ ವೇದಾಂತದರಿವು – ಮಕ್ಕಳಿಗೆಲ್ಲ ಅಧ್ಯಾತ್ಮ ಪಾಠವು |

ನೆಮ್ಮದಿ ಸಂತಸ ನೀಡುವ ಚೇತನ – ಲೋಕದ ಜನರಿಗೆ ಆತ್ಮ ದರುಶನ ||

ನೀನೇ ನಮಗೆ ಕರುಣೆಯ ಸಾಗರ – ಭವ ಬಂಧನವ ಬಿಡಿಸುವ ಗುರುವರ |

ಲೋಕದ ಹಿತವ  ಬಯಸುವ ಶಕ್ತಿ – ಕರುಣಿಸು ನಮಗೆ ಜೀವದ ಮುಕ್ತಿ ||

– ಆತ್ಮ ಜ್ಯೋತಿ ಗುರು ಆನಂದ

This image has an empty alt attribute; its file name is image-7.png

AJ SHARADA

ಪೂಜ್ಯ ಗುರೂಜಿ ಪ್ರಭೂಜಿಯವರ

ಪಾದಾರವಿಂದಗಳಿಗೆ ಶಾರದಾಳ ಮನದಾಳದ ಹೃದಯಪೂರ್ವಕ ನಮನಗಳಿಂದ ಎರಡು ಮಾತುಗಳು:

ನಿಮ್ಮ ಬಳಿ ಇರುವ ಪ್ರತಿಯೊಬ್ಬ ಶಿಷ್ಯರುಗಳೂ ಒಂದೊಂದು ಮುತ್ತು ರತ್ನ, ವಜ್ರ, ವೈಢೂರ್ಯಗಳಿಂದ ಕೂಡಿದ ಬೆಲೆ ಬಾಳುವ ಕಲ್ಲುಗಳಿಂದ ಮಾಡಲ್ಪಟ್ಟ ಬೆಲೆಬಾಳುವ ನಿಮ್ಮ ಕೊರಳಿನಲ್ಲಿ ಕಂಗೊಳಿಸುವ ಹಾರ.   

ಇಂತಹ ಹಾರದಿಂದ ಬರುವ ಬೆಳಕಿನಲ್ಲಿ ಸನ್ಮಾರ್ಗವನ್ನು ತೋರಿಸುತ್ತಿರುವ ನಿಮ್ಮಂತಹ 

ಸದ್ಗುರುವಿನ ಕರುಣೆ ಮತ್ತು ಕೃಪೆ ಸದಾ ನಮ್ಮ ಮೇಲಿರಲಿ ಎಂದು ಕಳಕಳಿಯಿಂದ

ಬೇಡುತ್ತಿದ್ದೇನೆ.

This image has an empty alt attribute; its file name is shaila-new-225x300.jpeg

AJ SHAILA

ನನ್ನೊಳಗೆ ನಾನಿದ್ದೇನೆಂಬ ಭ್ರಮೆಯನ್ನು ಬಿಡಿಸಿ ನಂಬಿಕೆಯ ವಾಸ್ತವವನ್ನು ನವಿರಾಗಿ ನೇವರಿಸಿ ಉಣಬಡಿಸಿ ವಾಸದ -ಉಪವಾಸವನ್ನು ತಿಳಿಸಿ ದೇಹವೆಂಬ ಚೀಲವನ್ನು ಗುಡಿಸಿ ರಂಗೋಲಿಯನ್ನು ಚಿತ್ರಿಸಿದ ಮಾಂತ್ರಿಕನಲ್ಲದ ಮಹಾಗುರುವನ್ನು 

ಏನೆಂದು ಬಣ್ಣಿಸಲಿ !!

ಬಂದ ಭಕ್ತರಿಗೆಲ್ಲ ವೇದಮಾತೆಯ ಸಾರವನ್ನು ಸೂಸಿ ಹಿಡಿ ಹಿಡಿಯಾಗಿ ಹಂಚುವ ಬರೀ ಮೂರೇ ವಾಕ್ಯದಲಿ [“ನಾನು ನಾನೆಂಬುದು ನಾನಲ್ಲ ಈ ದೇಹ ಮನ ಬುದ್ಧಿ ನಾನಲ್ಲ ಸಚ್ಚಿದಾನಂದ ಆತ್ಮ ಶಿವ ನಾನು ನಾನೇ”]

ಅರಿವನ್ನು ಬಿತ್ತುವ ಮಹಾಗುರುವನ್ನು ಏನೆಂದು ಬಣ್ಣಿಸಲಿ !! ಜೀವನಾಡುವ ಮಾತಿಗಿಂತ ಮೌನವೇ ಪ್ರಸ್ತುತ ಅನಿಸುತ್ತದೆ. 

ಅದುವೇ ಮಹಾಗುರು ಪ್ರಭುಜಿ “ಅನಂತ”. 

This image has an empty alt attribute; its file name is shobana-edited-260x300.png

AJ SHOBHANA

Guru Anantha Sachidananda Rupa, Karana Guru Shri Sadguru Rupa

Sadguru Shri Narasimha Prabhuji,

Salutations To Your Lotus Feet

It’s been a journey, full of queries, ups and downs, trying to find out somethings. There were no satisfying findings. Like a magical fountain here you are, giving the knowledge, answering all our queries, guiding light into whom we all want to merge. ‘Oh Ananda Swaroopa’ there is nothing but AWARENESS.

Thank you, Hari Om

AJ SUJATHA

In the ocean of Consciousness, I am here, on this planet Earth to realize that I am That, 

O God  , thank you for giving us a Satguru who is guiding us in every step towards you.

AJ SULOCHANA

 ಗುರೂಜಿ,ಭಗವಂತನ ಅವತಾರಿಯಾದ ನಿಮ್ಮ ಪಾದ ಕಮಲಗಳಿಗೆ ನನ್ನ ಅನಂತ ಕೋಟಿ ನಮನಗಳನ್ನು ಅರ್ಪಿಸುತ್ತಿದ್ದೇನೆ.

ನಮ್ಮನ್ನು ಜ್ಞಾನದ ಹಾದಿಗೆ ಎಳೆದೊಯ್ದು ,ಜೀವಾತ್ಮ ಪರಮಾತ್ಮನ ಐಕ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ಕೃಪೆ ತೋರುತ್ತಾ ನಿಮ್ಮ ಜ್ಞಾನಗಂಗೆ  ನಮಗೆ ದಾರಿದೀಪವಾಗಿ ನಮ್ಮನ್ನು ಮುನ್ನೆಡಸಲಿ.

ಭಗವದ್ ಅನುಗ್ರಹದಿಂದ ನಿಮ್ಮ ಕೃಪೆಯು ನಮಗಿರಲಿ ನಿಮ್ಮದೇ ಹಾದಿಯಲ್ಲಿ ನಡೆಯುವ ಯೋಗ, ಯೋಗ್ಯತೆಯು ನಮಗೆ ಅನವರತ ಪ್ರಾಪ್ತಿ ಯಾಗಲಿ ಎಂದು ಪ್ರಾರ್ಥಿಸುತ್ತೇನೆ.

AJ VASUKI

ಸಗುಣ ಸಾಕಾರ ರೂಪಿ ಬ್ರಹ್ಮನಿಂದ ನಿರ್ಗುಣ ನಿರಾಕಾರ ಬ್ರಹ್ಮನ ಕಡೆಗೆ ಕೈ ಹಿಡಿದು ಪ್ರೀತಿಯಿಂದ ಕರೆದುಕೊಂಡು ಹೋಗುತ್ತಿರುವ ನನ್ನ ದತ್ತ ಪ್ರಭು ಪಾದಾರವಿಂದಕ್ಕೆ ಕೋಟಿ ಕೋಟಿ ನಮನ. 

“ಮಾಯಾ ಮದಿರಾ ಪೀತಾಹ” ಎಂಬ ಗಾದೆ ಮಾತನ್ನು ಅರ್ಥ ಮಾಡಿಸಿ “ಜನನ ಮರಣ”ವೆಂಬ ಮಾಯೆಯಿಂದ ಮುಕ್ತಿ ಪಡೆಯಲು ಅನುಗ್ರಹಿಸುತ್ತಿರುವ ನನ್ನ ದತ್ತ ಪ್ರಭು ಪಾದಾರವಿಂದಕ್ಕೆ ಕೋಟಿ ಕೋಟಿ ನಮನ. 

ಜಾಗೃತ, ಸ್ವಪ್ನ, ಸುಷುಪ್ತಿಗಳಲ್ಲೂ ಆತ್ಮಜ್ಞಾನವನ್ನು ಹಂತ ಹಂತವಾಗಿ ಕಲಿಸುತ್ತಿರುವ ನನ್ನ ದತ್ತ ಪ್ರಭು ಪಾದಾರವಿಂದಕ್ಕೆ ಕೋಟಿ ಕೋಟಿ ನಮನ. 

“ಧರ್ಮ-ಅಧರ್ಮ” ವಿವೇಕ, “ಆತ್ಮ-ಅನಾತ್ಮ ವಿವೇಕ”, “ನಿತ್ಯ-ಅನಿತ್ಯ ವಿವೇಕ”, “ಕಾಮ್ಯ ಕರ್ಮ- ನಿಷ್ಕಾಮ ಕರ್ಮ ವಿವೇಕ”, “ಆತ್ಮ ಜ್ಞಾನ- ಪ್ರಪಂಚ ಜ್ಞಾನ ವಿವೇಕ”, ವೈರಾಗ್ಯ ಹಾಗೂ ಷಟ್ ಸಂಪತ್ತಿಗಳನ್ನು ಮೈಗೂಡುವಂತೆ ಮಾಡಿ, ಮುಮುಕ್ಷತ್ವದ ಕಡೆಗೆ ಕರೆದುಕೊಂಡು ಹೋಗುತ್ತಿರುವ 

ನನ್ನ ದತ್ತ ಪ್ರಭು ಪಾದಾರವಿಂದಕ್ಕೆ ಕೋಟಿ ಕೋಟಿ ನಮನ. 

ಕರ್ಮಯೋಗದಿಂದ — ಭಕ್ತಿ ಯೋಗ, ಭಕ್ತಿ ಯೋಗದಿಂದ — ಕ್ರಿಯಾ ಯೋಗ, ಕ್ರಿಯಾ ಯೋಗದಿಂದ — ಜ್ಞಾನ ಯೋಗ, ಜ್ಞಾನ ಯೋಗದಿಂದ — ಪೂರ್ಣತ್ವದ ಕಡೆಗೆ ಕರೆದುಕೊಂಡು ಹೋಗುತ್ತಿರುವ 

ನನ್ನ ದತ್ತ ಪ್ರಭು ಪಾದಾರವಿಂದಕ್ಕೆ ಕೋಟಿ ಕೋಟಿ ನಮನ. ಷಟ್ ಸಂಪತ್ತಿ ಎಂಬ ದೈವೀ ಗುಣಗಳು ಹಾಗೂ ಅರಿಷಡ್ವರ್ಗಗಳೆಂಬ ಅಸುರೀ ಗುಣಗಳ ನಡುವೆ ಸಮುದ್ರ ಮಂಥನ ನಡೆಸಿ ಆತ್ಮ ಜ್ಞಾನವೆಂಬ ಅಮೃತವನ್ನು ಹಂಚುತ್ತಿರುವ 

ನನ್ನ ದತ್ತ ಪ್ರಭು ಪಾದಾರವಿಂದಕ್ಕೆ ಕೋಟಿ ಕೋಟಿ ನಮನ. ದ್ವೈತದಲ್ಲಿದ್ದು, ದ್ವೈತವನ್ನರಿತು, ದ್ವೈತವನ್ನು ಮೀರಿ ಅದ್ವೈತದ ಕಡೆಗೆ ಕರೆದುಕೊಂಡು ಹೋಗುತ್ತಿರುವ 

ನನ್ನ ದತ್ತ ಪ್ರಭು ಪಾದಾರವಿಂದಕ್ಕೆ ಕೋಟಿ ಕೋಟಿ ನಮನ. “ನಾನು” ಎಂಬ ಎರಡಕ್ಷರದ ಪದವನ್ನು ಶಿಷ್ಯವೃಂದಕ್ಕೆ ಸಾವಿರ ರೀತಿಯಲ್ಲಿ ಅರ್ಥಮಾಡಿಸಿ “ನಾನು ನಾನೆಂಬುದು ನಾನಲ್ಲ…ಈ ದೇಹ ಮನ ಬುದ್ಧಿ ನಾನಲ್ಲ…ಸಚ್ಚಿದಾನಂದ ಆತ್ಮ ಶಿವ ನಾನು ನಾನೇ…ಶಿವೋಹಂ…ಶಿವೋಹಂ…ಶಿವೋಹಂ..” ಎಂಬ ಪ್ರತಿ ಪದವನ್ನೂ, ಪ್ರತಿ ಕ್ಷಣ ಜೀವಿಸುತ್ತಿರುವ, ಸ್ವಯಂ ಬ್ರಹ್ಮ 

ನನ್ನ ದತ್ತ ಪ್ರಭು ಪಾದಾರವಿಂದಕ್ಕೆ ಕೋಟಿ ಕೋಟಿ ನಮನ.  ನನ್ನ ಗುರು ಪರಮ ಗುರು, ಪರಾಪರ ಗುರ್ವಾತ್ಮಕನಾಗಿರುವ ಪರಭ್ರಹ್ಮ ವಸ್ತುವೇ… ಇದೋ ನಿನಗೆ ಎರಗುವೆನು ಕೋಟಿ ಕೋಟಿ ನಮನ……….