AJ KATHYAYINI (Group Coordinator)
‘ಜ್ಞಾನ ದಾಸೋಹದ ದೇಗುಲ’
ಹೊಟ್ಟೆ ಹಸಿದಿದೆ, ನೀರಡಸಿದೆ, ಕಂಗೆಟ್ಟಿಹೆನು ನಾನು
ಅನ್ನ ಸತ್ರವಿಹುದೇ ಸನಿಹದಲಿ ?
ಬಾ ಮಿತ್ರ, ಜ್ಞಾನ ದಾಸೋಹದ ದೇಗುಲಕೆ
ಉಣ್ಣು ಪ್ರಭುಗಳು ನೀಡುವ ಜ್ಞಾನದೆಸರ
ಕುಡಿ ಜ್ಞಾನ ಗಂಗೆಯ ತೃಷೆ ತಣಿವ ತನಕ
ಹೊತ್ತುಕಂತಿಹುದು, ವಿಶ್ರಮಿಸು ಇಲ್ಲೇ
ನಿನ್ನಲ್ಲೇ ನೀನಾಗಿ ನಿನ್ನಾತ್ಮದಾನಂದದ ಸವಿ ಸಮಾಧಿಯಲಿ
ನೇಸರನು ಬರುವಾಗ, ನಿನ್ನನ್ನೇ ಎಲ್ಲೆಲ್ಲೂ ಕಾಣುತ್ತ ಹಗುರಾಗಿ ಮುಂದೆ ಹೆಜ್ಜೆಯನಿರಿಸು.
AJ KALYANI
AVSC ವೇದಾಂತ ಸ್ಟಡಿ ಸರ್ಕಲ್ ಮೂಲಕ ನಮ್ಮ ಕೋಆರ್ಡಿನೇಟರ್ ಆ.ಜ್ಯೋ.ಕಾತ್ಯಯನಿಯವರಿಂದ, ಶ್ರವಣದಿಂದ ಮನನ ಮಾಡಿ ತಿಳಿದುಕೊಳ್ಳುವ ಭಾಗ್ಯವನ್ನು ಕಲ್ಪಿಸಿಕೊಟ್ಟಿರುವ ಸದ್ಗುರುಗಳಾದ ಪ್ರಭೂಜಿಯವರಿಗೆ ಸಾಷ್ಟಾಂಗ ನಮಸ್ಕಾರಗಳು.’ಈಶ್ವರೋ ಗುರುರಾತ್ಮೇತಿ’.ಈಶ್ವರಾನುಗ್ರಹದಿಂದ,ನನ್ನ ಪೂರ್ವ ಜನ್ಮದ ಫಲದಿಂದ ನನಗೆ ಆತ್ಮಜ್ಞಾನವನ್ನೂ, ಮುಕ್ತಿಯ ಮಾರ್ಗವನ್ನೂ ತಿಳಿಸಿ,ನನ್ನ ಜನ್ಮ ಸಾರ್ಥಕಕ್ಕೆ ಕಾರಣರಾದ ದೈವಸ್ವರೂಪಿ ಗುರೂಜಿಯವರಿಗೆ ಕೋಟಿ ಕೋಟಿ ನಮನಗಳು.
AJ Kalyani.

AJ RAJITHA
Atmajyothi Satsang has helped me to know the real meaning of the vedas and its application in our daily life. The benefits that I have received from AVSC group are immense; to name a few I’m able to do my duties in the material world in a better way by following the techniques given by Prabhuji, and by learning the importance of Atmajnana. I now do all my duties with Eeshwaraapana bhava.

AJ KALPANA
AVSC – ಆತ್ಮ ವಿಚಾರ study circle ಒಂದು ಅಪರೂಪ ಮತ್ತು ವಿಶೇಷವಾದ ತರಗತಿ. ಇದರಿಂದ ನಮಗೆ ಕಲ್ಪನೆಗೆ ನಿಲುಕದ ಪ್ರಯೋಜನವಾಗಿದೆ. ಜೀವನದ ನಿಜವಾದ ಅರ್ಥ ತಿಳಿಯಿತು. ನನ್ನ ಎಷ್ಟೋ ಜನ್ಮದ ಸುಕೃತವೋ ನನ್ನ ಸದ್ಗುರುಗಳು ದೊರತದ್ದು. ಕರ್ತೃತ್ವ ಭೋಕ್ತೃತ್ವ ಹಾಗೂ ಜ್ಞಾತೃತ್ವವನ್ನು ತೊಡೆದು ಹಾಕುವ ಎಲ್ಲ ಸರಳ,ಸುಲಭ ಉಪಾಯಗಳನ್ನು ಪ್ರತಿದಿನ ಪ್ರತಿ ಕ್ಷಣವೂ ತಿಳಿಸಿದ್ದಾರೆ. ನನಗೆ ಈ ಜೀವನದ ನಿಜವಾದ ಅರ್ಥ ತಿಳಿಸಿಕೊಟ್ಟಿದ್ದಾರೆ. ಭಗವಂತನಲ್ಲಿ ಶರಣಾಗತಿ ಅಂದರೆ ಏನು, ನಿನ್ನ ಕರ್ತವ್ಯಪಾಲನೆ ಮಾಡುತ್ತಲೇ ನೀನು ಹೇಗೆ ನಿರ್ಮೋಹತ್ವದಲ್ಲಿ ಸದಾ ಆನಂದಮಯಿಯಾಗಿ ಇರಬಹುದು ಅಂತ ತೋರಿಸಿದ ನಮ್ಮ ಪ್ರತ್ಯಕ್ಷ ದೇವರಾದ ಸದ್ಗುರು ಪ್ರಭೂಜಿಯವರಿಗೆ ಅನಂತಾನಂತ ವಂದನೆಗಳು.
AJ VIJAYA
ಆತ್ಮಜ್ಞಾನ ವಿಚಾರ ವೇದಿಕೆಯು ಅತ್ಯಂತ ಅಮೂಲ್ಯ. ಗುರುಗಳು ಸಿಕ್ಕಿರುವುದು ನಮ್ಮ ಪೂರ್ವ ಪುಣ್ಯದ ಫಲದಿಂದ. ನನಗಂತೂ ನಮ್ಮ ಪ್ರೀತಿಯ ಗುರುಗಳು ವಾತ್ಸಲ್ಯದಿಂದ ತುಂಬಿರುವ ಮಮತಾಮಯಿ ತಾಯಿಯ ಹಾಗೆ ಕಾಣುತ್ತಾರೆ. ಹೇಗೆ ಒಬ್ಬ ತಾಯಿಯು ತನ್ನ ಮಕ್ಕಳಿಗೆ ಪೌಷ್ಟಿಕವಾದ ಆಹಾರವನ್ನು ಪ್ರೀತಿಯಿಂದ, ಉಪಾಯವಾಗಿ ತುತ್ತು ತುತ್ತಾಗಿ ತಿನ್ನಿಸುತ್ತಾಳೋ ಹಾಗೆಯೇ ನಮ್ಮ ಗುರುಗಳು ವೇದ ಉಪನಿಷತ್ತಿನ ಸಾರವಾದ ಪವಿತ್ರಗ್ರಂಥಗಳನ್ನು ಹಂತಹಂತವಾಗಿ ಕ್ರಮವಾಗಿ ತಿಳಿಸಿ ಕೊಡುತ್ತಿದ್ದಾರೆ. ಇದರ ಹೆಸರನ್ನು ಕೂಡ ನಾವು ಓದುತ್ತಿರಲಿಲ್ಲ. ಆದರೆ ನಮಗೆ ಗುರುಗಳ ಕೃಪೆಯಿಂದ ಶ್ರವಣ, ಮನನದ ಮೂಲಕ ಒದಗುತ್ತಿದೆ.
ಈ ಕ್ಷಣಿಕ ಮಾಯಾ ಪ್ರಪಂಚವನ್ನೇ ಸತ್ಯ ಎಂದು ತಿಳಿದಿದ್ದ ನಮ್ಮಂತಹ ಅಜ್ಞಾನಿಗಳಿಗೆ ನಮ್ಮ ಸ್ವರೂಪ ಜ್ಞಾನವನ್ನು ತಿಳಿಸಿ, ಈ ಭವ ಬಂಧನದಿಂದ ಬಿಡಿಸುತ್ತಿರುವ ಗುರುಗಳಿಗೆ ಮತ್ತು ತರಗತಿಗೆ ನಮ್ಮ ನಿರಂತರ ನಮನ.
ನನಗಂತೂ ತುಂಬಾ ಶಾಂತಿ ಸಮಾಧಾನ ಸಿಕ್ಕಿದೆ.ಜೀವನದ ಅರ್ಥ ತಿಳಿಯಿತು.ಅಂತೂ ಇಂತೂ ಸರಿಯಾದ ಜಾಗವನ್ನು ತಲುಪಿದ್ದೇನೆ.ನಮ್ಮ ಗುರುಕೃಪೆಯಿಂದ ನನ್ನ ಜೀವನ ಸಾರ್ಥಕವಾದ ಹಾದಿಯಲ್ಲಿ ಇದೆ.ಇದಕ್ಕಿಂತ ಬೇರೆ ಏನೂ ಇಲ್ಲ.ಬೇಡವೂ ಬೇಡ.

AJ UMA MURTHY
ಈ ಜೀವನಿಗಿರುವ ಅಜ್ಞಾನವೆಂಬ ಕತ್ತಲೆಯಿಂದ ಬೆಳಕೆಂಬ ಆತ್ಮಜ್ಞಾನವನ್ನು ತುಂಬಿ, ಜ್ಞಾನಾತ್ಮ ಅಥವಾ ಆತ್ಮ ಜ್ಞಾನಿಯನ್ನಾಗಿ ಮಾಡಿ ‘ನಾನು’ ಎಲ್ಲರಲ್ಲೂ, ಎಲ್ಲದರಲ್ಲೂ, ಎಲ್ಲ ಕಾಲದಲ್ಲೂ ಸದಾ ಬೆಳಗುತ್ತಿರುವ ‘ಸಾಕ್ಷಿ ಚೈತನ್ಯ’ ಎಂದು ಅರಿವು ಮೂಡಿಸಿ, ಹುಟ್ಟು-ಸಾವಿನ ಬಂಧನದಿಂದ ಮುಕ್ತವನ್ನಾಗಿಸುವ ಓ ಗುರುವೇ, ನಿನಗೆ ಅನಂತಾನಂತ ಕೋಟಿ ಸಾಷ್ಟಾಂಗ ಪ್ರಣಾಮಗಳು.
ನಾ ನಿನ್ನೊಳಗೊಂದಾಗಿ ನಾನಿಲ್ಲವಾಗಿ ನೀನೆಲ್ಲವಾಗಿಹ ಅರಿವು ಸದಾಕಾಲ ನೀಡೆನಗೆ ಗುರುವೇ ಓ ಸದ್ಗುರುವೇ.
AJ KALAIVANI
ಒಂಬತ್ತು ತಿಂಗಳಲ್ಲಿ…. ಪ್ರತಿ ತಿಂಗಳು ಒಂದು ದಿನದ ತರಗತಿಯಲ್ಲಿ ಆಧ್ಯಾತ್ಮಿಕತೆಯನ್ನು, ನನ್ನ ಮಂಕು ಕವಿದಿದ್ದ ತಲೆಗೆ ಎಟುಕುವಂತೆ… ಬಹಳ ಸರಳವಾಗಿ… ತಿಳಿಯಾಗಿ… ಸ್ಪಷ್ಟವಾಗಿ… ಎಂದೆಂದೂ ಮರೆತೂ ದಾರಿ ತಪ್ಪದಂತೆ…. ನಮ್ಮ ಗುರೂಜಿ ಪ್ರಭೂಜಿ ಯವರು ತಿಳಿಸಿರುವರು. ಇದು ಬಹುಶಃ, ನಮ್ಮ ತಂದೆ ತಾಯಿ, ಗುರು, ಹಿರಿಯರ ಆಶೀರ್ವಾದ ಹಾಗೂ ನನ್ನ ಹಿಂದಿನ ಜನ್ಮಗಳ ಪುಣ್ಯ ಫಲವೆಂದೇ ಭಾವಿಸುವೆನು.
ವೇದೋಪನಿಷತ್ – ಭಾಗವತ, ಭಗವತ್- ಗೀತೆ, ಅಷ್ಟವಕ್ರ – ಜನಕ ಮಹಾರಾಜನ ಸಂವಾದ ಹಾಗೂ ಇನ್ನೂ ಅನೇಕ ಚಾರಿತ್ರಿಕ ಕಥೆಗಳ ಹಿನ್ನೆಲೆಯನ್ನು ಅಡಿಪಾಯವಾಗಿಟ್ಟುಕೊಂಡು, ಆಧ್ಯಾತ್ಮಿಕತೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು , ಬಹಳ ಸುಲಭವಾಗಿ, ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ತಿಳಿಸುವುದರಲ್ಲಿ , ನಮ್ಮ ಗುರೂಜಿ ಪ್ರಭೂಜಿಯವರು ಬಹಳ ಕಳಕಳಿಯಿಂದ ಶ್ರಮಿಸುತ್ತಿರುವರು.
“ನಮ್ಮನ್ನು ನಾವು ಸರಿಯಾಗಿ ತಿಳಿದುಕೊಂಡು ಬಿಟ್ಟರೆ, ನಿಜವಾಗಿಯೂ ನಾವೇನಂಬುದನ್ನು ಅರಿತುಕೊಂಡು ಬಿಟ್ಟರೆ,” ಆಧ್ಯಾತ್ಮದ ದಾರಿಯಲ್ಲಿ 50% ಸವಿಸಿದಂತೆಯೇ ಎಂಬುದನ್ನು ಗುರೂಜಿ ಪ್ರಭೂಜಿಯವರು ಬಹಳ ಸ್ಪಷ್ಟವಾಗಿ ತಿಳಿಸಿರುವರು. ಹಾಗೂ, ನಮ್ಮನ್ನು ನಾವು ಅರಿತುಕೊಂಡ ನಂತರ…. ನಾವು ಮಾಡುವ ಪ್ರತಿಯೊಂದು ಕೆಲಸ – ಕಾರ್ಯಗಳನ್ನು ‘ಪ್ರಜ್ಞೆ ಯಿಂದ – ಅರಿವಿನಿಂದ’ ಮಾಡತೊಡಗಿದರೆ ನಮ್ಮ ಜೀವನವೂ ಸದಾ ಕಾಲ ಆಧ್ಯಾತ್ಮಿಕತೆಯಲ್ಲಿದ್ದಂತೆಯೇ ಎಂಬುದನ್ನೂ ಬಹಳ ಸ್ಪಷ್ಟವಾಗಿ ತಿಳಿಸಿರುವರು.
🙏🙏ಇಂತಹ ಗುರೂಜಿಯನ್ನು ಪಡೆಯಬೇಕಾದರೆ, ನಿಜವಾಗಿಯೂ ನಾವೆಲ್ಲರೂ ಬಹಳ ಅದೃಷ್ಟವಂತರು… ಅನೇಕಾನೇಕ ಜನ್ಮಗಳ ಪುಣ್ಯ ಮಾಡಿರಬೇಕು 🙏🙏
ಶ್ರೀ ಗುರುಭ್ಯೋ ನಮಃ. ಹರಿಃ ಓಂ ತತ್ಸತ್. ಶ್ರೀ ಕೃಷ್ಣಾರ್ಪಣಮಸ್ತು.