
AJ SARASWATI (Group Coordinator)
AJ SANDHYA
ಹರಿ ಓಂ,
ಪೂಜ್ಯ ಗುರುಗಳಾದ ಪ್ರಭುಜಿ ಯವರ ಪಾದಕಮಲಗಳಿಗೆ ಆತ್ಮಜ್ಯೋತಿ ಸಂಧ್ಯಾ ಸುರೇಶ್ ಮಾಡುವ ಹೃದಯಪೂರ್ವಕ ಅನಂತ ಅನಂತ ಶಿರಸಾಷ್ಟಾಂಗ ನಮನಗಳು. ಆತ್ಮಜ್ಯೋತಿ ಸರಸ್ವತಿಯವರು ನಮ್ಮ ಎ ವಿ ಎಸ್ ಸಿ ಕ್ಲಾಸ್ ನಡೆಸುತ್ತಿದ್ದಾರೆ ತತ್ವಬೋಧ ಸೆಲ್ಫ್ ನಾಲೆಡ್ಜ್ ಮತ್ತು ಆತ್ಮಸಾಕ್ಷಾತ್ಕಾರ ಅಪರೋಕ್ಷ ಅನುಭೂತಿ ಪ್ರಭುಜಿ ಅವರ ವಿಡಿಯೋಸ್ ಕೇಳಿ ಅದರ ಬಗ್ಗೆ ಎ ವಿ ಎಸ್ ಸಿ ಕ್ಲಾಸ್ನಲ್ಲಿ ಗ್ರೂಪ್ ಡಿಸ್ಕಸ್ ಮಾಡುತ್ತೇವೆ ಆತ್ಮಜ್ಯೋತಿ ಸರಸ್ವತಿಯವರು ತುಂಬಾನೇ ಚೆನ್ನಾಗಿ ಕ್ಲಾಸ್ನಲ್ಲಿ ಉದಾಹರಣೆ ಸಹಿತ ವಿವರವಾಗಿ ತಿಳಿಸಿಕೊಡುತ್ತಾರೆ. ನಾನು ಸಹ ಗ್ರೂಪ್ ಡಿಸ್ಕಶನ್ ಇರುವುದರಿಂದ ಮತ್ತೆ ಮತ್ತೆ ಶ್ರವಣ ಮಾಡುವುದರಿಂದ ಮನನ ಮತ್ತು ನಿಧಿ ಧ್ಯಾಸ ವಾಗುತ್ತದೆ. ನಮ್ಮ ಮನೆಯಲ್ಲಿ ನಾನು ಮತ್ತು ಆತ್ಮಜ್ಯೋತಿ ಸುರೇಶ್ ಬಾಬು ಇಬ್ಬರು ಪ್ರಭುಜಿ ಅವರ ವೀಡಿಯೋಸ್ ಕೇಳುವುದರಿಂದ ಮನೆಯ ವಾತಾವರಣ ತುಂಬಾನೇ ಬದಲಾಗಿದೆ ನೆಮ್ಮದಿ ಶಾಂತಿ ಸಮಾಧಾನ ನಮ್ಮ ಜೀವನದಲ್ಲಿ ಮನುಷ್ಯ ಆನಂದ ಜೀವನಕ್ಕಾಗಿ ಹುಟ್ಟಿನಿಂದ ಸಾವಿನವರೆಗೂ ಬೆಳಗಿನ ಸಮಯ ಎದ್ದಾಗಿನಿಂದ ರಾತ್ರಿ ಮಲಗುವತನಕ ಸತತ ಪ್ರಯತ್ನ ಮಾಡುತ್ತಾನೆ ಏನಾದರೂ ಜೀವನ ದುಃಖ, ವ್ಯಸನ, ಸಮಸ್ಯೆಗಳಲ್ಲಿ ಕಳೆದು ಹೋಗುತ್ತದೆ ಎಂಬುದು ಎಲ್ಲರ ಅನುಭವವೇ ಆಗಿದೆ ಆದರೆ ಬೆರಳ ಮೇಲೆ ಎಣಿಕೆ ಮಾಡುವಷ್ಟು ಕೆಲವು ಮಹಾತ್ಮರು ಆನಂದವಾಗಿ ಜೀವಿಸುವುದನ್ನು ನಾವು ಕಾಣಬಹುದು ಅವರಲ್ಲಿ ನಮ್ಮ ಪ್ರಭುಜಿ ಅವರು ಒಬ್ಬರು ಮನುಷ್ಯನ ಮೂಲಭೂತ ಸಮಸ್ಯೆ- ಅಹಂಕಾರ, ಮಮಕಾರ, ಅಂದರೆ ನಾನು, ನನ್ನದು, ಎಂಬುದೇ ಆಗಿದೆ ಅಹಂಕಾರ ಮಮಕಾರಗಳ ನಿವೃತ್ತಿ ದೈವ ಚಿಂತನೆಯಿಂದಲೇ ಸಾಧ್ಯ. “ಅಂತರಂಗದಲ್ಲಿ ಹರಿಯ ಕಾಣು” ಈ ಶರೀರ, ಮನ, ಬುದ್ದಿ, ನಾನಲ್ಲ ನೀನು ಆತ್ಮಸ್ವರೂಪ, ಶಿವಸ್ವರೂಪಿ, ಆನಂದ ಸ್ವರೂಪಿ, ಎಂಬುದನ್ನು ಮತ್ತೆ ಮತ್ತೆ ತಿಳಿಸಿ ಕೊಡುತ್ತಿರುವ ನಮ್ಮ ಪ್ರಭುಜಿ ಅವರಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು, ನಮ್ಮ ಗ್ರೂಪನ್ನು ನಡೆಸುತ್ತಿರುವ ಆತ್ಮಜ್ಯೋತಿ ಸರಸ್ವತಿಯವರಿಗೆ ನನ್ನ ವಂದನೆಗಳು.
AJ ASHA LAKSHMI
ಹರಿಃ ಓಂ ಗುರೂಜಿ
ಸರಸ್ವತಿಯವರು ನಮ್ಮ AVSC ಕ್ಲಾಸ್ ಚನ್ನಾಗಿ ನಡೆಸುತ್ತಿದ್ದಾರೆ. ಸಮಧಾನದಿಂದ ಉತ್ತರಿಸುತ್ತಾರೇ. AVSC ಕ್ಲಾಸ್ ನಿಂದ ನನಗೇ ಶ್ರವನ ಮನನ ಮತ್ತು ನಿಧಿಧ್ಯಾಸನವು ಆಗುತ್ತಿದೆ. ನನ್ನ ಸಂಸಾರದಲ್ಲಿ ತುಂಬ ಬದಲಾವ ನೆಗಳೂ ಆಗುತ್ತಿದೆ. ಸಮಾಧಾನ ಹೆಚ್ಚಾಗಿದೆ, ಬಂದ ಪರಿಸ್ಥಿ ತಿಯನ್ನು ಒಪ್ಪಿ ಕೊಳ್ಳುವ ಮನೋಭಾವನೆ ಸಹನೆ ತಾಳ್ಮೆ ಹೆಚ್ಚಾಗಿದೆ.
ಶರೀರ ಮನಸ್ಸು ಬುದ್ಧಿ ನಾನಲ್ಲ ಇದನ್ನು ಅರಿಯುತ್ತಿರುವ ಚೈತನ್ಯ ನಾನು,ನಾನು ಆತ್ಮಸ್ವರೂಪಿ, ಆನಂದ ಸ್ವರೂಪಿ ಎಂದು ಅರ್ಥ ಮಾಡಿಸಿದ ನಮ್ಮ ಗುರುಳಾದ ಪ್ರಭೂಜಿ ಯವರಿಗೆ ಅನಂತ ಕೋಟಿ ನಮನಗಳು ಮತ್ತು ಅದನ್ನು ಮನನಮಾಡಲು ಅವಕಾಶ ಮಾಡಿ ಕೊಟ್ಟ ನಮ್ಮ AVSC ಕ್ಲಾಸ್ ನಡೆಸುತ್ತಿರುವ ಸರಸ್ವತಿಯವರಿಗೂ ನಮನಗಲು ಮತ್ತು ಈ ಗ್ರೂಪ್ ಗೆ ಪರಿಚಯಿಸಿದ ನನ್ನ ತಂಗಿ ಸಂಧ್ಯಳಿಗೂ ತುಂಬು ಹೃದಾಯದ ವಂದನೆಗಳು
AJ SUDHA LAKSHMI
ಹರಿ ಓಂ ಗುರೂಜಿ, ಪೂಜ್ಯ ಗುರುಗಳಾದ ಪ್ರಭುಜಿ ಅವರ ಪಾದಾರವಿಂದಗಳಿಗೆ ಆತ್ಮಜ್ಯೋತಿ ಸುಧಾಳ ಸಾಷ್ಟಾಂಗ ಪ್ರಣಾಮಗಳು, ಆತ್ಮಜ್ಯೋತಿ ಸರಸ್ವತಿಯವರು ನಮ್ಮ ಎ ವಿ ಎಸ್ ಸಿ ಕ್ಲಾಸ್ ನಡೆಸುತ್ತಿದ್ದಾರೆ ಇವರು ತುಂಬಾ ಸಮಾಧಾನದಿಂದ ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತ ಹಾಗೂ ಜೊತೆಗೆ ತಮಗೆ ತಿಳಿದದ್ದನ್ನು ತುಂಬಾ ವಿವರವಾಗಿ ಸಮಾಧಾನ ಚಿತ್ತದಿಂದ ನಡೆಸಿಕೊಂಡು ಹೋಗುತ್ತಾ ಇದ್ದಾರೆ. ನನಗೆ ತುಂಬಾ ಉಪಯೋಗ ವಾಗುತ್ತಿದೆ ಎಷ್ಟೋ ವಿಷಯಗಳು ನನ್ನ ಹರಿವಿಗೆ ಬಂದು ಪ್ರಯೋಜನ ಹೊಂದಿದ್ದೇನೆ ನನಗೆ ತತ್ವಬೋಧ ಸ್ವಲ್ಪ್ ನಾಲೆಡ್ಜ್ ಇದೆಲ್ಲ ತಿಳಿದಿರಲಿಲ್ಲ ಈಗ ಇದರ ಬಗ್ಗೆ ಕ್ಲಾಸ್ನಲ್ಲಿ ಎಲ್ಲರೊಟ್ಟಿಗೆ ಡಿಸ್ಕಶನ್ ಮಾಡುವುದರಿಂದ ಹಾಗೂ ಮೇಡಂ ಅದರ ಮೇಲೆ ಕ್ವೆಶ್ಚನ್ ಪ್ರಿಪೇರ್ ಮಾಡಿ ಕೊಡುವುದರಿಂದ ಅದರ ಬಗ್ಗೆ ದಿಸ್ಕಸ್ ಮಾಡುವುದರಿಂದ ಬಹಳ ಉಪಯೋಗ ಹೊಂದಿದ್ದೇನೆ ಹಾಗೂ ಜೀವನದಲ್ಲಿ ತುಂಬಾ ಬದಲಾವಣೆಗಳನ್ನು ಹೊಂದಿದ್ದೇನೆ ಸ್ವಲ್ಪ ಸ್ವಲ್ಪ ಆತ್ಮಜ್ಞಾನದ ಬಗ್ಗೆ ಹರಿವು ಕಾಣುತ್ತಾ ಇದ್ದೇನೆ ಇದರಿಂದ ತುಂಬಾ ಸಮಾಧಾನ ಶಾಂತ ಮನೋಭಾವನೆ ಹೊಂದಿದ್ದೇನೆ ಈ ಶರೀರ ಮನಸ್ಸು ಬುದ್ದಿ ನಾನಲ್ಲ ಇದನ್ನು ಹರಿಯುತ್ತಿರುವ ಚೈತನ್ಯ ನಾನು, ನಾನು ಆತ್ಮಸ್ವರೂಪ, ಆನಂದಸ್ವರೂಪ, ಎಂದು ಅರ್ಥ ಮೂಡಿಸಿದ ನಮ್ಮ ಗುರುಗಳಾದ ಪ್ರಭುಜಿ ಅವರಿಗೆ ಕೋಟಿ ಕೋಟಿ ನಮನಗಳು ಮತ್ತು ಅದನ್ನು ಮಾಡಲು ಅವಕಾಶ ಮಾಡಿಕೊಡುತ್ತಿರುವ ಎ ವಿ ಎಸ್ ಸಿ ಗ್ರೂಪ್ ನಡೆಸುತ್ತಿರುವ ಸರಸ್ವತಿ ಅವರಿಗೂ ನನ್ನ ನಮನಗಳು ಪೂಜ್ಯ ಗುರುಗಳಾದ ಪ್ರಭುಜಿ ಯವರ ಪಾದಾರವಿಂದಗಳಿಗೆ ನನ್ನ ಶಿರಸಾಷ್ಟಾಂಗ ನಮನಗಳು ಗುರುದೇವ. ಹರಿ
AJ SHOBHA JAGADISH
ಹರಿ ಓಂ,ಪೂಜ್ಯ ಪ್ರಭುಜಿ
ಯವರ ಪಾದಾರವಿಂದಗಳಿಗೆ ಆತ್ಮಜ್ಯೋತಿ ಶೋಭಾಳ ಸಾಷ್ಟಾಂಗ ಪ್ರಣಾಮಗಳು. ಸರಸ್ವತಿ ಗ್ರೂಪ್ನಿಂದ ಆತ್ಮಜ್ಯೋತಿ ಸರಸ್ವತಿಯವರು ನಮ್ಮ ಎ ವಿ ಎಸ್ ಸಿ ಗ್ರೂಪ್ ಕ್ಲಾಸ್ ತುಂಬಾ ಚೆನ್ನಾಗಿ ನಡೆಸುತ್ತಿದ್ದಾರೆ ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಪ್ರಶ್ನಿಸಿದಾಗ ಅವರು ಆ ವಿಷಯದ ಬಗ್ಗೆ ಉದಾಹರಣೆ ವಿವರವಾಗಿ ತಿಳಿಸಿಕೊಡುತ್ತಾರೆ, ಇದರಿಂದ ನನಗೆ ತುಂಬಾ ಉಪಯೋಗ ಆಗುತ್ತಿದೆ. ನನಗೆ ಆತ್ಮಜ್ಞಾನ ಬಗ್ಗೆ ಹರಿವು ಇರಲಿಲ್ಲ ಈಗ ಈ ಗ್ರೂಪ್ ನಿಂದ ನನಗೆ ಅರ್ಥವಾಗದ ಎಷ್ಟೋ ವಿಷಯಗಳು ಅರ್ಥವಾಗುತ್ತದೆ, ನನಗೆ ತತ್ವಬೋಧ, ಸೆಲ್ಫ್ ನಾಲೆಡ್ಜ್ ,ಇದೆಲ್ಲ ತಿಳಿದೇ ಇರಲಿಲ್ಲ ಈಗ ಅದರ ಬಗ್ಗೆ ಕ್ಲಾಸಿನಲ್ಲಿ ಎಲ್ಲರೂ ದಿಸ್ಕಸ್ ಮಾಡುವುದರಿಂದ ಮತ್ತು ಸರಸ್ವತಿಯವರು ಈ ವಿಷಯದ ಬಗ್ಗೆ ಪ್ರಶ್ನೆಗಳ ಪಟ್ಟಿ ಮಾಡಿಕೊಡುವುದರಿಂದ ಈ ಪ್ರಶ್ನೆಗಳಿಗೆ ಪ್ರಿಪೇರ್ ಆಗಿ ಎಲ್ಲರೂ ಡಿಸ್ಕಸ್ ಮಾಡುವುದರಿಂದ ಆತ್ಮಜ್ಞಾನದ ಬಗ್ಗೆ ಹರಿವು ಆಗುತ್ತದೆ ಮತ್ತೆ ಮತ್ತೆ ಮನನ ಮಾಡುವುದರಿಂದ ನನ್ನ ಜೀವನದಲ್ಲಿ ತುಂಬಾ ಒಳ್ಳೆಯ ಬದಲಾವಣೆಗಳು ಆಗಿದೆ ಆನಂದದಿಂದ ಇದ್ದೇನೆ, ಮನೆಯಲ್ಲಿ ಸಹ ನೆಮ್ಮದಿ ಆನಂದವನ್ನು ಕಾಣುತ್ತಿದ್ದೇನೆ, ನನಗೆ ಆತ್ಮಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಇನ್ನು ಹೆಚ್ಚಾಗಿ ತಿಳಿದುಕೊಳ್ಳಬೇಕೆಂಬ ಹಂಬಲ, ನಮ್ಮ ಗ್ರೂಪ್ನಲ್ಲಿ ಇರುವ ಎಲ್ಲರಿಗೂ ವಂದನೆಗಳನ್ನು ತಿಳಿಸುತ್ತಾ ನನ್ನ ತಂಗಿ ಸಂಧ್ಯಾ ಈ ಗ್ರೂಪಿಗೆ ನನ್ನನ್ನು ಸೇರಿಸಿದ್ದಕ್ಕೆ ಅವಳಿಗೂ ಸಹ ವಂದಿಸುತ್ತೇನೆ ಪೂಜ್ಯ ಪ್ರಭುಜಿ ಯವರ ಪಾದಗಳಿಗೆ ನನ್ನ ಅನಂತ ಅನಂತ ಶಿರಸಾಷ್ಟಾಂಗ ಪ್ರಣಾಮಗಳು. ಹರಿ ಓಂ.🙏🙏🙏

AJ SAVITRI
I was introduced to AVSC by my niece. I was searching who can teach TatvaBodha, which happens to be the foundation for studying upanishads and other spiritual Books. This AVSC is helping to know about Atmagnana self-realization. Aham Bramhasmi, “Tat Tvam Asi”.
“Ee Deha Mana budhi Naanalla, Sadashivoham”, to realize this is, Atmagnana. I have started my journey in this direction. As the group consists of only 5-6 members, it is very helpful to interact and get clarifications. our AJ Saraswathi is taking all initiatives to clarify our doubts. Prabhuji’s answers for the questions raised in very interesting and informative. He is helping all Atma Jyothi’s for their all round development. I am really lucky to have AJ Sarawathi and Prabhuji giving guidance for spiritual growth, yoga and meditation.

AJ JAYASHREE
My quest to embark on the spiritual journey has been a long one, which has been kindled on and off many a times. Through AVSC, I have started a streamlined and a sustained effort in mentally growing towards “tat twam asi”, clearing up doubts in my mind through questioning in our group sessions with AJ saraswathi mam and my other team mates “It has really helped me get my mind to come to peace in many such turbulant situations when I see the amount of violence around me in the society.
I would like to thank all those who have helped me in understanding the maya and coming out of its clutches and a special thanks to Prabhuji and AJ Saraswathi mam.